Love Quotes In Kannada: ಪ್ರೀತಿಯ ಅತ್ಯುತ್ತಮ ಮತ್ತು ಕೆಟ್ಟ ವಿಷಯವೆಂದರೆ ಅದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ.
ನೀವು ಯಾರನ್ನಾದರೂ ನಿಜವಾಗಿಯೂ ಪ್ರೀತಿಸಿದಾಗ, ಆ ಭಾವನೆಗಳನ್ನು ಪದಗಳ ಮೂಲಕ ವ್ಯಕ್ತಪಡಿಸುವುದು ಕಷ್ಟವಾಗಬಹುದು. ವಾಸ್ತವವಾಗಿ, ನಿಜವಾದ ಪ್ರೀತಿ ನಿಮಗೆ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಬಹುಶಃ ಅದು ಅತ್ಯುತ್ತಮ ರೀತಿಯ ಪ್ರೀತಿಯಾಗಿದೆ – ಅಲ್ಲಿ ಆ ವ್ಯಕ್ತಿಯು ನಿಮ್ಮನ್ನು ಸಂಪೂರ್ಣವಾಗಿ ಪ್ರೀತಿಸುವಂತೆ ಮಾಡುತ್ತದೆ ಅದರಿಂದಾಗಿ ನಿಮಗೆ ಸರಿಯಾಗಿ ಯೋಚಿಸಲು ಸಾಧ್ಯವಾಗುವುದಿಲ್ಲ.
ಸಾರ್ವಕಾಲಿಕ ಅತ್ಯುತ್ತಮ ಪ್ರೀತಿಯ ಉಲ್ಲೇಖಗಳ ಈ ಪಟ್ಟಿಯು ನಿಮ್ಮ ಪ್ರೀತಿಯ ಭಾವನೆಗಳನ್ನು ನಿಮ್ಮ ಸಂಗಾತಿಗೆ ವ್ಯಕ್ತಪಡಿಸಲು ಸುಲಭವಾಗಿಸುತ್ತದೆ. ಈ ಪ್ರಸಿದ್ಧ ಸ್ಪೂರ್ತಿದಾಯಕ ಪ್ರೇಮ ಉಲ್ಲೇಖಗಳು ಮತ್ತು ಹೇಳಿಕೆಗಳು ನೀವು ಅತ್ಯಂತ ಸರಳವಾದ ಮಾತುಗಳೊಂದಿಗೆ ಹೇಗೆ ಭಾವಿಸುತ್ತಿದ್ದೀರಿ ಎಂಬುದನ್ನು ವಿವರಿಸಲು ಸಹಾಯ ಮಾಡುತ್ತದೆ.
ಈ ಪಟ್ಟಿಯಲ್ಲಿ, ಈ ಪೀಳಿಗೆಯಿಂದ ಮತ್ತು ನಮ್ಮ ಹಿಂದಿನ ತಲೆಮಾರುಗಳ ಉಲ್ಲೇಖಗಳನ್ನು ನೀವು ಕಾಣಬಹುದು. ಆದರೆ ಈ ಪ್ರತಿಯೊಂದು ಉಲ್ಲೇಖಗಳು ಒಂದು ಹಂತದಲ್ಲಿ ಅಥವಾ ಇನ್ನೊಂದರಲ್ಲಿ ಆಳವಾಗಿ ಪ್ರೀತಿಸುತ್ತಿದ್ದ ವ್ಯಕ್ತಿಯಿಂದ ರೂಪುಗೊಳ್ಳುತ್ತವೆ.
ಆದ್ದರಿಂದ, ಯಾವುದೇ ಹೆಚ್ಚಿನ ಸಡಗರವಿಲ್ಲದೆ, ಪ್ರೀತಿಯ ಬಗ್ಗೆ ಉತ್ತಮವಾದ ನುಡಿಗಟ್ಟುಗಳು ಇಲ್ಲಿವೆ, ಮತ್ತು ಪ್ರೀತಿಯಲ್ಲಿರುವುದು ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಗೆ ವ್ಯಕ್ತಪಡಿಸಲು ನೀವು ಇದನ್ನು ಬಳಸಬಹುದು.
Love Quotes In Kannada – ಪ್ರೀತಿಯ ಮಾತುಗಳು
1.
ನಿನಗಾಗಿ ಕಾಯುವ ಬದಲು, ಕಲ್ಲ ಮುಂದೆ ಕಾದಿದ್ದರೆ, ಕಲ್ಲಿಗೆ ಜೀವ ಬರುತ್ತಿತ್ತೋ ಏನೋ? ನಿನಗಾಗಿ ಕಣ್ಣೀರ್ ಇಡುವ ಬದಲು, ಕಲ್ಲ ಮುಂದೆ ಅತ್ತಿದ್ದರೆ, ನನ್ನ ಕಣ್ಣೀರ ಓರುತ್ತಿತ್ತೋ ಏನೋ?
2.
ಅದೆಷ್ಟೇ ದಿನಗಳು ಕಳೆಯಲಿ ನಾ ನಿನಗೊಸ್ಕರ ಕಾದಿರುವೆ ಒಂದು ವೇಳೆ ನಾಳೆ ನಾ ಇಲ್ಲಂದ್ರೆ ನನ್ ಗೋರಿ ಮೇಲೆ ಒಂದು ಹೂ ಇಟ್ಟು ಹೇಳಿ ಬಿಡು ” stupid I Love you” ಅಂತ …
3.
ಗೆಳತಿ… ಕಳೆದುಹೋದ ಕ್ಷಣಗಳನ್ನು ನೆನಪಿಸಿಕೊಂಡು ಕುಳಿತಾಗ, . . . . . . ನನ್ನ ನಾನೇ ಮರೆತದ್ದು ನನಗೆ ನೆನಪಾಗಲೇ ಇಲ್ಲ..
4.
ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು.. ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು… ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು… ನೆನಪಿರಲಿ…. ದೀಪ ಆರದಿರಲಿ,ಮುತ್ತು ಒಡೆಯದಿರಲಿ,ಪುಷ್ಪ ಬಾಡದಿರಲಿ…..!!!
5.
ಕಣ್ಣೊಳಗಿನ ಕನಸನ್ನು ಕದಿಯಬೇಡ…….. ಸುಪ್ತ ಮನಸ್ಸಿನ ಮಾತನ್ನು ಮರಿಯಬೇಡ……. ಹೃದಯದ ಭಾವನೆಯ ಹೇಳದಿರಬೇಡ……. ಎಲ್ಲವನು ತನ್ನೊಳಗೆ ಅವಿತಿಟ್ಟು ಕೊರಗಬೇಡ.
6.
ಕಣ್ಣಿಗೆ ಕಣ್ಣೀರೆಂದಿಗೂ ಭಾರವೆನಿಸುವದಿಲ್ಲ
ಆದರೆ, ಆ ನೀರು ಹೊರಬರುವಾಗ
ಹೃದಯಕ್ಕೆ ತುಂಬಾ ಭಾರವೆನಿಸುತ್ತದೆ….
7.
ಮುದ್ದು ನೀ ನೆನಪಾದರೆ,
ಭಾವನೆಗಳನ್ನು ವರ್ಣಿಸಲು ಶಬ್ದಗಳೆ ಸಿಗುತ್ತಿಲ್ಲ ಕಣೆ…..
ನೀ ಯಾಕೆ ಇಷ್ಟು ಇಷ್ಟವಾದೆ ನನಗೆ?
8.
ನಮ್ಮಿಬರ ನಡುವಿನ ಅಂತರ ತುಂಬಾ ದೂರ ಇರಬಹುದು..
ಆದರೆ ಪ್ರೀತಿಯ ನೆಟ್ವರ್ಕ್ ಸಿಕ್ಕೆ ಸಿಗುತ್ತೆ..
ಒಂದು ಮಿಸ್ ಕಾಲ್ ಕೊಟ್ಟು ನೋಡಮ್ಮಿ ನೀನು..
ನನ್ ಎದೆಯ ಕಾಲರ್ ಟ್ಯೂನ್ ನಿನ್ ಹೆಸರಗಿರುತ್ತೆ
9.
#ಹುಡ್ಗೀರ್ #ಗೆ #ಗೌರವ #ಕೊಡೋದು ✌ #ಹುಡುಗರ#ಸಂಸ್ಕೃತಿ #ಹುಡ್ಗುರ್ ಗೆ #ಕೈ_ಕೊಡೋದು #ಹುಡ್ಗೀರ್ #ಪದ್ದತಿ.
10.
ಪರಿಚಯ ಆಕಸ್ಮಿಕವಾದರೂ,
ಸ್ನೇಹ ಶಾಶ್ವತವಾಗಿರಲಿ,
ದೂರ ಅನಿವಾರ್ಯವಾದರೂ,
ನೆನಪುಗಳು ಅಮರವಾಗಿರಲಿ.
11.
ದೀಪ ಪ್ರೀತಿಯ ಸಂಕೇತ.ದೀಪ
ಜ್ಞಾನದ ಸಂಕೇತ.
ಒಂದು ದೀಪದಿಂದ ಇನ್ನೊಂದು ದೀಪ ಹಚ್ಚಿದರೆ,
ಆ ಮೊದಲಿನ ದೀಪದ ಕಾಂತಿಗೇನೂ ಕುಂದಿಲ್ಲ.
ಎರಡನೆಯ ದೀಪವೂ ಕಾಂತಿಯಿಂದ ಪ್ರಜ್ವಲಿಸುತ್ತಿರುತ್ತದೆ..
ಹಾಗೆಯೇ ನಾವೆಲ್ಲರೂ ಪ್ರಜ್ವಲಿಸುತ್ತಿರುವ ದೀಪಗಳಾಗಿರೋಣ..
ಎಣ್ಣೆ ಮುಗಿಯುವ ತನಕ ಜಗಕೆ ಬೆಳಕ ನೀಡೋಣ..
ಪ್ರೀತಿ, ಜ್ಞಾನವನ್ನು ನಮ್ಮಲ್ಲಿ ತುಂಬಿಕೊಂಡು, ಅದನ್ನು ಪಸರಿಸೋಣ…
12.
ಕಣ್ಣುಒಪ್ಪಿದವರನ್ನ ಮರೆಬಹುದು,
ಮನಸು ಒಪ್ಪಿದವರನ್ನ
ಮರೆಯೋಕೆ ಆಗೋಲ್ಲ,
ಯಾಕೆಂದರೆ ಕಣ್ಣುಗಳಿಗೆ ನೂರು ಮುಖ, ಮನಸಿಗೆ ಒಂದೇ ಮುಖ…
13.
ನಿನಗಾಗಿ ನಾ ಕಾದ ಕ್ಷಣ
ನನ್ನ ಮನಸಿನಲ್ಲೇನೋ ತಲ್ಲಣ
ನೀ ಕಾಡಿಸದಿರು ಆ ಕ್ಷಣ
ನನ್ನನ್ನೇ ಪ್ರೀತಿಸು ಪ್ರತಿ ಕ್ಷಣ
ನಿನ್ನ ಮನದಲ್ಲೇ ಇರುವೆ ನಾ ಅನು ಕ್ಷಣ
ಎಂದೆಂದೂ…….
14.
ಪ್ರೀತಿ ಬಯಸೋ ಮನಕ್ಕೆ ಸದಾ ಪ್ರೀತಿ ಸಿಗಲಿ ಸ್ನೇಹ ಬಯಸೋ ಹೃದಯಕ್ಕೆ ಸದಾ ಸ್ನೇಹ ಸಿಗಲಿ ಆದರೆ, ಯಾವುದೂ ಸಿಗದ ಮನಸ್ಸಿಗೆ, ಯಾವತ್ತೂ ನೋವಾಗದಿರಲಿ…..
15.
ಪುಟ್ಟ ಹುಡುಗಿ ತನ್ನ ಅಣ್ಣನನ್ನ ಕೇಳುತ್ತಾಳೆ. . . ಅಣ್ಣ ‘ಪ್ರೀತಿ’ ಅಂದರೆ ಎನು? . . ಅಣ್ಣ ನಿಂದ ಮುದ್ದಾದ ಉತ್ತರ – ನೀನು ನನ್ನ ಬ್ಯಾಗ್ ನಿಂದ ದಿನ ಚಾಕಲೇಟ್ ಕದಿಯುತ್ತೀಯಾ ಆದರು ನಾನು ದಿನ ಪುನಃ ಪುನಃ ಅಲ್ಲೆ ಚಾಕಲೇಟ್ ಇಡುತ್ತಿನಿ, ಅದೇ ಪ್ರೀತಿ.
16.
ದೇವರು ನಮಗೆ ಯಾಕೆ… ಎರಡು ಕಣ್ಣು, ಎರಡು ತುಟಿ, ಎರಡು ಕೈ, ಎರಡು ಕಾಲು ಕೊಟ್ಟು ಹೃದಯ ಮಾತ್ರ ಒಂದೇ ಕೊಟ್ಟಿದ್ದು, ಯಾಕಂದರೆ ನೀವು ಸರಿಯಾದ ಹೃದಯವನ್ನು ಹುಡುಕಿ ನಿಮ್ಮ ಹ್ರುದಯದೊಡನೆ ಜೊತೆಯಾಗಿಸಿಕೊಳ್ಳಲು.
17.
“ಕಲೆಗಾರ ನಾನಲ್ಲ” “ಕವಿಗಾರ ನಾನಲ್ಲ” ಭಾವನೆಗಳೊಂದಿಗೆ ಬದುಕುವುದು ಬಿಟ್ಟು, ಬೇರೇನು”ಗೊತ್ತಿಲ್ಲ” ಆಸ್ತಿಯೂ”ನನಗಿಲ್ಲ” ಆಸೆಯೂ”ನನಗಿಲ್ಲ” ನಿಮ್ಮ”ಸ್ನೇಹ-ಪ್ರೀತಿ”ಬಿಟ್ಟು, ಬೇರೇನು”ಬೇಕಿಲ್ಲ”.
18.
ನಾ ದನಿಯಾಗಲು ಹೋದೆ ಯಾರದೋ ಮೌನಕ್ಕೆ ….. ನನ್ನ ದನಿಯು ಮೌನವಾಯಿತು ಹೃದಯಾ ನೀ ಮಾಡಿದ ಮೋಸಕ್ಕೆ .. ಆರ್ಯ ನಿನ್ನೊಲವಿನ ಆತ್ಮಿಯ …
19.
ತೊರೆದು ಹೋದ ಗೆಳತಿ
ಸುಮ್ಮನೆ ಹೋಗಲಿಲ್ಲ!
ಜೀವನವಿಡೀ ಕಾಡುವ
ನೆನಪಿನ ರಾಶಿ ಕಂತೆ
ಕೊಟ್ಟು ಹೋದಳು!
20.
ಒಂದು ಮಾತನ್ನು ಆಡದೆ
ಮೌನದಿಂದ ಪ್ರತೀ ಕ್ಷಣವೂ
ಈ ಹೃದಯವ ಕೊಲ್ಲುವ ಬದಲು
ಒಂದೇ ಮಾತಿನಿಂದ ಒಂದೇ ಸಾರಿ
ಕೊಂದು ಬಿಡು ಗೆಳತಿ…?
ನಿಮಗೆ ಈ ಪ್ರೀತಿಯ ಉಲ್ಲೇಖಗಳು ಇಷ್ಟವಾದರೆ ದಯವಿಟ್ಟು ನಿಮ್ಮ ಸ್ನೇಹಿತರೊಡನೆ ಇದನ್ನು ಶೇರ್ ಮಾಡಿ.
ಇದನ್ನು ಓದಿ:
- 20 Allama Prabhu Vachanagalu In Kannada – ಅಲ್ಲಮಪ್ರಭುವಿನ ವಚನಗಳು
- 20 Basavanna Vachanagalu In Kannada – ಬಸವಣ್ಣನವರ ವಚನಗಳು
- 20 General Knowledge Questions In Kannada With Answers – ಸಾಮಾನ್ಯ ಜ್ಞಾನ