Friendship Quotes In Kannada: ಸ್ನೇಹ, ಇದು ಎಲ್ಲರಿಗೂ ಬಹಳ ವಿಶೇಷವಾದ ಸಂಬಂಧ. ಆ ಸಂಬಂಧ, ನಾವು ನಮಗಾಗಿ ಆರಿಸಿಕೊಳ್ಳುತ್ತೇವೆ. ಸ್ನೇಹಕ್ಕಾಗಿ ಅರ್ಥವು ವಯಸ್ಸಿನೊಂದಿಗೆ ಬದಲಾಗುತ್ತದೆ. ಶಾಲೆಯ ಗೆಳೆಯರಿಗೆ ಕಾಲೇಜಿನೊಂದಿಗೆ ಇರಲು ಸಾಧ್ಯವಾಗದಿದ್ದರೆ, ಕೆಲಸ ಸಿಕ್ಕ ಕೂಡಲೇ ಕಾಲೇಜಿನ ಸ್ನೇಹಿತರು ಬೇರೆಯಾಗುತ್ತಾರೆ. ಕಚೇರಿಯಲ್ಲಿ ಕೆಲವು ಸ್ನೇಹಿತರು ವಿಶೇಷವಾಗಿದ್ದರೆ, ಕೆಲವರನ್ನು ಕೇವಲ ಹೆಸರಿನ ಸ್ನೇಹಿತರು ಎಂದು ಕರೆಯಲಾಗುತ್ತದೆ.
ಸ್ನೇಹಿತರನ್ನು ಕುಟುಂಬವಾಗಿ ಆಯ್ಕೆ ಮಾಡಲಾಗುತ್ತದೆ, ಮತ್ತು ಆದ್ದರಿಂದ ನಮ್ಮ ಪ್ರತಿಯೊಂದು ಜೀವನದಲ್ಲಿ ನಂಬಲಾಗದಷ್ಟು ಮೌಲ್ಯಯುತವಾಗಿದೆ. ಸ್ನೇಹಿತರು ನಾವು ಎಂದಿಗೂ ಹೊಂದಿರದ ಸಹೋದರಿಯರು ಮತ್ತು ಸಹೋದರರು, ಮತ್ತು ಯಾವುದೇ ಪರಿಸ್ಥಿತಿಯಲ್ಲಿ ನಮ್ಮ ಪಕ್ಕದಲ್ಲಿದ್ದಾರೆ.
ನಿಮ್ಮ ಸ್ನೇಹಿತರಿಗೆ ನೀವು ಎಷ್ಟು ಕೃತಜ್ಞರಾಗಿರುತ್ತೀರಿ ಎಂದು ಪದಗಳಲ್ಲಿ ಹೇಳುವುದು ಕಷ್ಟವಾಗಬಹುದು. ಅದಕ್ಕಾಗಿಯೇ ನಿಮ್ಮ Best ಸ್ನೇಹಿತನನ್ನು ಸ್ನೇಹ ಪ್ರಕಟಿಸಲು ನಾವು 20 ಸ್ನೇಹ ಉಲ್ಲೇಖಗಳನ್ನು (ನುಡಿಮುತ್ತುಗಳು) ಸಂಗ್ರಹಿಸಿದ್ದೇವೆ.
Click here: slot88
Friendship Quotes In Kannada – ಸ್ನೇಹದ ನುಡಿಮುತ್ತುಗಳು
1.
ಮನಸೆಂಬ ಮಂದಿರದಲ್ಲಿ
ಕನಸೆಂಬ ಸಾಗರದ
ನೆನಪೆಂಬ ಅಲೆಗಳಲ್ಲಿ
ಚಿರಕಾಲ ಮಿನುಗುತ್ತಿರಲಿ
ನಮ್ಮ ಈ ಅಮರ ಸ್ನೇಹ.
2.
ನಮ್ಮನ್ನು ಹೊಗಳುತ್ತಿರುವ ಸಾವಿರಾರು ಜನರಿಗಿಂತ,
ತಪ್ಪು ಮಾಡಿದಾಗ ತಿದ್ದುವ ಒಬ್ಬ ಒಳ್ಳೆಯ ಮಿತ್ರ ಮತ್ತು ಗುರುವಿದ್ದರೆ ಸಾಕು,
ಹೊಗಳುವ ಜನ ಸಿಕ್ತಾರೆ,
ಆದರೆ ಎಡವಿದಾಗ ತಪ್ಪು ತಿದ್ದುವವರು ಬೆರಳೆಣಿಕೆ ಮಂದಿ ಮಾತ್ರ.
3.
ನಗುವಿನ ಹಿಂದಿನ ನೋವನ್ನು,
ಮೌನದ ಹಿಂದಿನ ಮಾತನ್ನು,
ಸಿಟ್ಟಿನ ಹಿಂದಿನ ಪ್ರೀತಿಯನ್ನು,
ಅರ್ಥಮಾಡಿಕೊಳ್ಳಬಲ್ಲವರ ನಿಜವಾದ ಗೆಳೆಯರು❤️.
4.
ರಕ್ತ ಹಂಚಿಕೊಂಡು ಹುಟ್ಟಿಲ್ಲ,
ಆಸ್ತಿ ಹಂಚಿಕೊಂಡು ಇಲ್ಲ,
ಆದರೆ ಕಷ್ಟಸುಖ ಹಂಚಿಕೊಳ್ಳಲು ಇರುವ ಸಂಬಂಧವೇ ಗೆಳೆತನ.
5.
ಸ್ನೇಹಕ್ಕೆ ಬೇಕಾಗಿರುವುದು ವ್ಯಕ್ತಿಗಳು ಅಲ್ಲ,
ನಮ್ಮನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಒಂದು ಮನಸ್ಸುು.
6.
ಯಾವುದೋ ನೋವಿಂದ ನಮ್ಮ ಕಣ್ಣು ತುಂಬಿದಾಗ,
ಕಣ್ಣೀರನ್ನು ಒರೆಸುವ ಸುಂದರ ಜೀವ ಒಂದು ಜೊತೆಗಿದ್ದರೆ,
ಕಣ್ಣೀರು ಕೂಡ ನಮಗೆ ಇಷ್ಟವಾಗುತ್ತದೆ, ಪ್ರೀತಿಯ ಬಾಳ ಬದುಕಿನ ಬಾಂಧವ್ಯದ ಗೆಳೆತನ.
7.
ನಿಮ್ಮ ಜೊತೆಗಿರುವ ಸ್ನೇಹಿತನ ಹೃದಯ ಕಲ್ಲು ಅಂತ ಗೊತ್ತಾದ ಮೇಲೆ ಯಾವತ್ತು ಅವರಿಂದ ದೂರಾಗಬೇಡಿ, ಏಕೆಂದರೆ ಕಲ್ಲಿನಲ್ಲಿ ಬರೆದ ಹೆಸರು ಯಾವತ್ತೂ ಅಳಿಸಲ್ಲ.
8.
ಯಾವುದೋ ಜೀವ ಕಾಯುವಾಗ ನೆನೆಯೋದು ಅವರ ಸ್ನೇಹಿತರನ್ನು ಯಾಕೆಂದರೆ ಅವರ ಜೊತೆ ಸಾಯೋವರೆಗೂ ಇರೋನು ಫ್ರೆಂಡು ಒಬ್ಬನೇ.
9.
ಶುದ್ದ ಹಾಲಿನಲ್ಲಿ ನೊರೆ ಜಾಸ್ತಿ,
ಶುದ್ದ ಹೃದಯದಲ್ಲಿ ಪ್ರೀತಿ ಜಾಸ್ತಿ,
ಶುದ್ದ ಸ್ನೇಹದಲ್ಲಿ ಜಗಳ ಜಾಸ್ತಿ,
ಇದನ್ನು ಅರಿತರೆ ಬಾಳಿನಲ್ಲಿ ಸುಖ ಜಾಸ್ತಿ.
10.
ಒಂದು ಒಳ್ಳೆಯ ಪುಸ್ತಕ ನೂರು ಜನ ಗೆಳೆಯರಿಗೆ ಸಮಾನ,
ಒಬ್ಬ ಒಳ್ಳೆಯ ಗೆಳೆಯ ಒಂದು ಗ್ರಂಥಾಲಯಕ್ಕೆ ಸಮಾನ.
11.
ಲವರ್ಸ್ ಒಂದು ಎಳನೀರಿಗೆ 2 ಸ್ಟ್ರಾ ಹಾಕಿಕೊಂಡು ಕುಡಿತ್ತಾರೆ.
ಆದರೆ…
ನಾವು ಸ್ನೇಹಿತರು ಒಂದು ಎಳನೀರು ತಗೊಂಡ್ರೆ ಸ್ಟ್ರಾ ಯುಸ್ ಮಾಡಲ್ಲ, “ಲೋ ಮಗನೇ ಸರಿಯಾಗಿ ಅರ್ದ ಕುಡಿದು ಇನ್ನ ಅರ್ದ ನನಗೆ ಕೊಡು, ಇಲ್ಲ ಅಂದ್ರೆ ಕೊಲೆ ಮಾಡ್ತಿನಿ”.
12.
ಕೆಲ ಸ್ನೇಹಿತರು ತಮ್ಮ ಒಂದೆರಡು ದಿನಗಳ ಸಂತೋಷಕ್ಕಾಗಿ,
ಇತರ ಇಡೀ ಜೀವನದ ಸಂತೋಷವನ್ನು ಹಾಳು ಮಾಡಿಬಿಡುತ್ತಾರೆ,
ಇಂತಹವರು ಸ್ನೇಹಿತರಲ್ಲ.
13.
ನಮ್ಮನ್ನು ಇಷ್ಟಪಡುವ ವ್ಯಕ್ತಿಗಳು ನಾವು ಹೇಗಿದ್ದರೂ ಹೊಂದುಕೊಂಡು ಹೋಗುತ್ತಾರೆ, ಇಷ್ಟವಿಲ್ಲದ ವ್ಯಕ್ತಿಗಳು ನಾವು ಎಷ್ಟೇ ಹೊಂದಿಕೊಂಡು ಹೋದರು ದೂರವಾಗುತ್ತಾರೆ,
ಹೊಂದಿಕೊಂಡು ಹೋಗುವವನು ನಿಜ ಸ್ನೇಹಿತ.
14.
ಜೀವನದಲ್ಲಿ ತಪ್ಪು ಮಾಡಿದರೂ ಪರವಾಗಿಲ್ಲ,
ಆದರೆ ನಂಬಿಕೆಗೆ ಹಾಗೂ ಸ್ನೇಹಕ್ಕೆ ಎಂದು ದ್ರೋಹ ಮಾಡಬೇಡಿ….
15.
ಜೀವನದಲ್ಲಿ ನೋವಿಲ್ಲದ ಮನಸ್ಸಿಲ್ಲ,
ನಗುವಿಲ್ಲದ ಮುಖವೆಲ್ಲ,
ನಗುವ ಮುಖದ ಹಿಂದೆ ನೋವೆಂಬ ಮನಸ್ಸು ಇದ್ದೇ ಇರುತ್ತೆ,
ಸ್ನೇಹಿತರೆ ಏನೇ ಆಗಲಿ ನೀವು ಯಾವಾಗಲೂ ನಗುತ್ತಿರಿ..
16.
ಪ್ರೀತಿನೇ ಆಗ್ಲಿ ಗೆಳೆತನವೆ ಆಗಲಿ ಹಣೆಯಲ್ಲಿ ಬರೆದಿರಬೇಕು, ಒತ್ತಾಯದಿಂದ ಯಾರು ನಮ್ಮವರು ಆಗುವುದಿಲ್ಲ.
17.
ಯಾರು ಸ್ನೇಹಿತರನ್ನು ಹೊಂದಿರುತ್ತಾರೋ, ಅವರಿಗೆ ಕನ್ನಡಿಯ ಅವಶ್ಯಕತೆ ಇರುವುದಿಲ್ಲ.
18.
ಸುಮ್ನೆ ನೋಡಿದ್ರೆ ಸಿಂಪಲ್ಲಾಗ್ ಕಾಣ್ತೀನಿ, ಕೆಣಕಿ ನೋಡಿದ್ರೆ ಕರಾಬ್ ಆಗಿ ಕಾಣ್ತೀನಿ,
ಪ್ರೀತಿಯಿಂದ ನೋಡುದ್ರೆ ಒಳ್ಳೆ ದೋಸ್ತಿ ಆಗಿರ್ತೀನಿ.
19.
ಸ್ನೇಹಕ್ಕಾಗಿ ಪ್ರಾಣ ಕೊಡುವುದು ದೊಡ್ಡ ವಿಷಯ ಅಲ್ಲ ಅಂತ ಸ್ನೇಹ ಸಿಗುವುದು ದೊಡ್ಡ ವಿಷಯ ಆಗಿರುತ್ತೆ…
20.
ಗೆಳೆಯ ಜಗತ್ತಿನಲ್ಲಿ ಆಸ್ತಿ ಇಲ್ಲದಿದ್ದರೇನಂತೆ ಜಗತ್ತನ್ನೇ ಗೆಲ್ಲುವ ದೋಸ್ತಿ ಇದೆಯಲ್ಲ ಅಷ್ಟೆ ಸಾಕು ಜಗತ್ತೆ ನಮ್ಮದು.
ಈ 20 ಫ್ರೆಂಡ್ಶಿಪ್ ಕೋಟ್ಸ್ ನಿಮಗೆ ಇಷ್ಟವಾದರೆ ದಯವಿಟ್ಟು ನಿಮ್ಮ ಪ್ರೀತಿಯ ಗೆಳೆಯ ಮತ್ತು ಗೆಳತಿಯರೊಡನೆ ಇದನ್ನು ಶೇರ್ ಮಾಡಿ.
ಇದನ್ನು ಓದಿ: