Ambigara Choudayya Vachanagalu In Kannada: 12 ನೇ ಶತಮಾನದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಒಬ್ಬ ಸಂತ, ಕವಿ ಮತ್ತು ಸಾಮಾಜಿಕ ವಿಮರ್ಶಕ. ಅವರು ದೋಣಿಗಾರರಾಗಿದ್ದರು, ಅವರು ಕಲ್ಯಾಣ್ಗೆ ಹೋದರು, ಅಲ್ಲಿ ವಿರಶೈವ ಚಳವಳಿಗೆ ಸೇರಿಕೊಂಡರು ಮತ್ತು ಲಿಂಗಾಯತವಾದವನ್ನು ಅನುಸರಿಸಿದರು.
ಬಸವರಿಂದ ಪ್ರಭಾವಿತರಾಗಿ, ಅವರ ಸ್ವಲ್ಪ ಕಚ್ಚಾ ಬರಹಗಳು ಉನ್ನತ ಜಾತಿಗಳನ್ನು ಟೀಕಿಸುತ್ತಿದ್ದವು. ಅಂಬಿಗರ ಚೌಡಯ್ಯರನ್ನು ಕೆ.ಎ.ಪನಿಕರ್ ಅವರು ವಚನಾ ಚಳವಳಿಯ ಕವಿಗಳ ಕೋಪಗೊಂಡವರು ಎಂದು ಬಣ್ಣಿಸಿದ್ದಾರೆ.
ತನ್ನ 274 ಪ್ರವಚನರಿಂದಾಗಿ ಸಂತನಾಗಿ ಪೂಜಿಸಲ್ಪಟ್ಟ ಅವನು ಮಹಿಳೆಯರಿಗೆ ಕಿರುಕುಳ ನೀಡಿದವರಿಗೆ ಮತ್ತು ಅವರು ಧಾರ್ಮಿಕ ಚಾರ್ಲಾಟನ್‌ಗಳೆಂದು ಪರಿಗಣಿಸಲ್ಪಟ್ಟವರಿಗೂ ಸವಾಲು ಹಾಕಿದರು. ಮಾತುಗಳು ಮತ್ತು ಕಾರ್ಯಗಳಲ್ಲಿ ಪರಿಶುದ್ಧನಾದ ಹೃದಯದಲ್ಲಿ ದೇವರು ಖಂಡಿತವಾಗಿಯೂ ವಾಸಿಸುತ್ತಾನೆ ಎಂದು ಅವರು ಕಲಿಸಿದನು.
Ambigara Choudayya Vachanagalu In Kannada – ಅಂಬಿಗರ ಚೌಡಯ್ಯ ವಚನಗಳು
1.
ನೀರೊಳಗಿಕ್ಕಿದ ಕೋಲಿನಂತೆ :
ಭೇದವನೊಳಕೊಂಡ ವಾದ್ಯದಂತೆ :
ನಾದದಲಿ ಸೋಂಕಿದ ಶೂನ್ಯದಂತೆ :
ಭೇದಾದಿಭೇದಂಗಳಲ್ಲಿ ಅಭೇದ್ಯವ ಭೇದಿಸಬಲ್ಲಡೆ, ನಾದ ಬಿಂದು ಕಳೆಗೆ
ಅತೀತವೆಂದನಂಬಿಗರ ಚೌಡಯ್ಯ
2.
ಬ್ರಹ್ಮ ಮೊದಲನರಿಯ ವಿಷ್ಣು ತುದಿಯನರಿಯ ಎಡೆಯಣ
ಮಾನವರೆತ್ತ ಬಲ್ಲರೊ ಮೃಡನಂತುವ?
ಇತ್ತಣ ಮನದವರಿತ್ತಿತ್ತ ಕೇಳಿ ಅತ್ತಣ ಸುದ್ದಿ ನಿಮಗೇತಕ್ಕೆ?
ನಿಸ್ಸಂಗಿ ನಿರೂಪದ ಮಹಾತ್ಮರೆ ಬಲ್ಲರೆಂದನಂಬಿಗ ಚೌಡಯ್ಯ.
3.
ನಾಲ್ಕು ವೇದವನೋದಿದನಂತರ ಮನೆಯ ಬೋನವ
ಶಿವಭಕ್ತರ ಮನೆಯಲ್ಲಿರುವ ನಾಯಿ ಮೂಸಿ ನೋಡಲಾಗದು,
ಸಾಮವೇದಿ ಹೋಗುತ್ತಿರಲು ಶ್ವಪಚಯ್ಯಗಳು ತಮ್ಮ ಪಾದುಕದಿಂದ
ಪಾಕವ ಮುಚ್ಚಿದರು ಶ್ವಾನೂಶ್ರೇಷ್ಠವೆಂದು ಇಕ್ಕಿದನು ಮುಂಡಿಗೆಯ ಎತ್ತಿರೋ
ಜಗದ ಸಂತೆಯ ಸೂಳೇಮಕ್ಕಳೇ ಜಗಕ್ಕೆ ಪಿತನೊಬ್ಬನಲ್ಲದೆ ಇಬ್ಬರೆಂದು
ಬೊಗಳುವರ ಮೂರಯ ಮೇಲೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
4.
ಮಡುವಿನಲ್ಲಿ ಮೊಗೆತಹೆನೆ ಅಗ್ನವಣಿ ಶುದ್ಧವಲ್ಲ ;
ಗಿಡುವಿನಲ್ಲಿ ಪುಷ್ಪವತಹೆನೆ ಹೂ ನಿರ್ಮಾಲ್ಯ ;
ಅಟ್ಟಡಿಗೆಯನಾದಡೆ ಮನ ಮುನ್ನವೆ ಉಂಡಿತ್ತು ; ನುಡಿವ ಶಬ್ದ ಎಂಜಲಾಯಿತ್ತು.
ಹಿಡಿಯೊಳಯಿಂಕೆ ಒಂದ ಕೊಂದು ಬಂದು ಲಿಂಗವೆಂದು ಸಂಕಲ್ಪವ ಮಾಡಿದಡೆ
ಅದಕೆ ಬೋನವ ಕೊಡಲೊಲ್ಲೆನೆಂದನಂಬಿಗರ ಚೌಡಯ್ಯ.
5.
ಹರಿಗೆ ಚಕ್ರ ಡಾಣೆ, ಬ್ರಹ್ಮಂಗೆ ವೇದ ಪಾಶ,
ಹಿರಿಯ ರುದ್ರಂಗೆ ಜಡ ಜಪಮಣಿ ನೋಡಾ !
ಧರೆಯವರೆಲ್ಲಾ ನೆರೆದು ಇವರ ದೇವರೆಂಬರು,
ಪರದೈವ ಬೇರೆಂದಾತನಂಬಿಗರ ಚೌಡಯ್ಯ.
6.
ಒಬ್ಬ ಗುರುವೆಂಬಿರಿ ಆ ಗುರುವು ತೋರಿದ ಚರಲಿಂಗಕ್ಕೆ ಅರಿಕೆಯಿಲ್ಲ ;
ಕಿರುಕುಳದ ಬೆನ್ನೊಳು ಹರಿದಾಡುವ ನರಕಿಯ ಯಮನವರು ಕೊಂಡೊಯ್ದು
ನಡುವಿಂಗೆ ನುಲಿಕಿಯನಿಕ್ಕಿ ಮೆಟ್ಟಿ ಮೆಟ್ಟಿ ಗುದ್ದುವಾಗ ಪಲುಗಿರಿದು ಬಿದ್ದು
ಹೋಗುವ ಮಾನವರ ಕಂಡು, ಜಗವರಿಕೆಯಲ್ಲಿ ನಗುತಿದ್ದಾತ ನಮ್ಮ ಅಂಬಿಗರ ಚೌಡಯ್ಯ.
7.
ಕಲ್ಲದೇವರ ಪೂಜೆಯ ಮಾಡಿ ಕಲಿಯುಗದ ಕತ್ತೆಗಳಾಗಿ ಹುಟ್ಟಿದರು ;
ಮಣ್ಣದೇವರ ಪೂಜಿಸಿ ಮಾನಹೀನರಾದರು :
ಮರನ ದೇವರೆಂದು ಪೂಜಿಸಿ ಮಣ್ಣ ಕೂಡಿದರು ;
ದೇವರ ಪೂಜಿಸಿ ಸ್ವರ್ಗಕ್ಕೇರದ ಹೋದರು !
ಜಗದ್ಭರಿತವಾದ ಪರಶಿವನೊಳಗೆ ಕಿಂಕರನಾದ
ಶಿವಭಕ್ತನೆ ಶ್ರೇಷ್ಠನೆಂದಾತ ನಮ್ಮ ಅಂಬಿಗರ ಚೌಡಯ್ಯನು.
8.
ಅಂಗದೊಳಗಿಪ್ಪುದು ಲಿಂಗವಲ್ಲ ; ಅಂಗದ ಹೊರಗಿಪ್ಪುದು ಲಿಂಗವಲ್ಲ ;
ಎಲ್ಲಾ ಅಂಗಾಂಗಗಳನ್ನೊಳಗೊಂಡ ಲಿಂಗವು ಹೋಗುತ್ತ ಬರುತ್ತಿರ್ಪುದಲ್ಲಿ :
ಚಲನೆಯಿಲ್ಲದ ಅಚಲವಪ್ಪ ಲಿಂಗಕ್ಕೆ ಹೋಯಿತ್ತು ಬಂದಿತ್ತೆಂಬ ಸಂದೇಹವಿಲ್ಲವಾಗಿ
ಕರ್ಮಕೌಟಿಲ್ಯವೆಲ್ಲಿಯದೆಂದಾತನಂಬಿಗರ ಚೌಡಯ್ಯ
9.
ಅಜಾತನನೊಲಿಸದೂಡೆ ಅದೇತರ ಮಂತ್ರ?
ಅದೇತರಾಗಮ ಹೇಳಿರೊ?
ಆದಾವ ಮುಖದಲ್ಲಿ ಲಿಂಗ ಬಂದಿಪ್ಪುದೂ?
ರೂಪಿಲ್ಲದಾತ ನಿಮ್ಮ ಮಾತಿಂಗೆ ಬಪ್ಪನ?
ಅದೇತರ ಮಾತೆಂದನಂಬಿಗರ ಚೌಡಯ್ಯ.
10.
ಅರು ಹಿರಿಯರ ದೈವದ ಪರಿ ನೋಡಾ
ಹೊಲೆಯರ ಬೊಮ್ಮಗ ತೊಗೆ ತುಪ್ಪವ ಬೇಡುವಂತೆ
ಬ್ರಹ್ಮ ವಿಷ್ಣುಗಳೆಂಬರಿನ್ನೂ ಕಾಣರು.
ವೇದಂಗಳು ನಾಚದೆ ಉಲಿವ ಪರಿ ನೋಡಾ !
ಗಂಗೆವಾಳುಕ ಸಮರುದ್ರರೆಲ್ಲರು ಲಿಂಗವ ಕಂಡರೈಸೆ.
ಸ್ವಯಂಭುವ ಕಾಣರೆಂದನಂಬಿಗರ ಚೌಡಯ್ಯ.
11.
ಅಸುರರ ಮಾಲೆಗಳಿಲ್ಲ ತ್ರಿಶೂಲ ಡಮರುಗಗಳಿಲ್ಲ
ಬ್ರಹ್ಮಕಪಾಲವಿಲ್ಲ ಭಸ್ಮ ಭೂಷಣನಲ್ಲ,
ವೃಷಭ ವಾಹನನಲ್ಲ ಋಷಿಯ ಮಗಳೊಡನಿರ್ದಾತನಲ್ಲ,
ಎಸಗುವ ಸಂಸಾರದ ಕುರುಹಿಲ್ಲದಾತಂಗೆ ಹೆಸರಾವುದು
ಇಲ್ಲವೆಂದನಂಬಿಗರ ಚೌಡಯ್ಯ
12.
ಆರು ಲಿಂಗ ಮೂರು ಲಿಂಗವೆಂಬರು,
ನಮಗುಳ್ಳುದೊಂದೇ ಲಿಂಗ,
ಒಂದು ಲಿಂಗದಲ್ಲಿ ಒಂದು ಮನ ಸಿಕ್ಕಿದಡೆ ಮತ್ತೊಂದು
ಲಿಂಗವ ನೆನೆಯಲಿಲ್ಲವೆಂದಾತನಂಬಿಗರ ಚೌಡಯ್ಯ.
13.
ಓದಿಹೆನೆಂಬ ಒಡಲು, ಕಂಡೆಹೆನೆಂಬ ಭ್ರಾಂತು,
ಸರ್ವರಿಗೆ ಹೇಳಿಹೆನೆಂಬ ತೇಜಸ್ಸು ಇಂತಿವೆಲ್ಲವನಿದಿರಿಂಗೆ ಹೇಳಿ
ತನ್ನುದರವ ಹೊರೆವ ಕಕ್ಕುಲತೆಯಲ್ಲದ ,
ಆತ ಅರಿವಿಂಗೆ ಒಡಲಲ್ಲಾ ಎಂದನಂಬಿಗರ ಚೌಡಯ್ಯ.
14.
ತರುಗಳ ಹರಿಯ, ಜಲಧಿಯ ತುಳುಕೆ,
ಸ್ಥಾವರವ ಪೂಜಿಸೆ, ವಚನಕ್ಕೆ ತಾರೆ,
ಮನದಲ್ಲಿ ನೆನೆಯ, ಬಸುರೊಳಗಿದ್ದು
ಕಾಲ ನೀಡುವ ಬುದ್ದಿ ಕೂಡದು ಕೂಡದು ಎಂದನಂಬಿಗರ ಚೌಡಯ್ಯ
15.
ತಾನು ಮಾಡುವ ಭಕ್ತಿ ಲಿಂಗದ ಉಪದೇಶವನರಿಯದ ಕಾರಣ
ಕಂಡ ಕಂಡ ದೈವಕ್ಕೆ ಹೋಗಿ, ಮಂಡಿ ಮುಂದಲೆಯ ಕೊಟ್ಟನಾದಡೆ ಆತ ಭಕ್ತನಲ್ಲ ; ಆತನ ಸಂಗಡ ಹೋಗಿ ಉಪದೇಶವ ಮಾಡಿದಾತನು ಗುರುವಲ್ಲ ;
ಅಂಥವರ ಮನೆಯಲ್ಲಿ ಹೊಕ್ಕು ಉಂಬಾತ ಜಂಗಮವಲ್ಲ ;
ಈ ಭಕ್ತ ಜಂಗಮದ ಭೇದವೆಂತೆಂದಡೆ ಒಡಲ ಕಿಚ್ಚಿಗೆ ಹೋಗಿ ತುಡುಗುಣಿನಾಯಿ ಹೊಕ್ಕು.
ತನ್ನ ಒಡಲ ಹೋರೆದಂತಾಯಿತಯ್ಯ ಎಂದು ಪೊಡವಿಯೊಳಗೆ ಡಂಗುರವನಿಕ್ಕಿ ಸಾರಿದಾತ
ನಮ್ಮ ಅಂಬಿಗರ ಚೌಡಯ್ಯ.
16.
ನಾನಾ ದೇವರುಗಳೆಲ್ಲ ನಾಯಿಯ ಮಕ್ಕಳು ಸುತ್ತಲಿನ ದೇವರುಗಳೆಲ್ಲ
ಸುತ್ತಗಿಯ ಮಕ್ಕಳು ತೊತ್ತಿನ ಮಕ್ಕಳು ಜಗವೆಲ್ಲಾ ಲೋಕದ ಕತೆಗಳಿಗೇಕೆ
ತಿಳಿಯದಂದನಂಬಿಗರ ಚೌಡಯ್ಯ
17.
ನಿಜಗಂಡನ ಸಂಗವನೊಲ್ಲದೆ ಬೊಜಗರ ಸಂಗ ಮಾಡುವ ಬಜಾರಿ
ತೊತ್ತಿಗೆಲ್ಲಿಯದೊ ನಿಜಮುತೈದೆತನ ?
ತ್ರಿಜಗವಂದಿತ ಲಿಂಗವ ಕರಕಮಲದಲ್ಲಿ ಹಿಡಿದುಕೊಂಡಿರ್ದ ಬಳಿಕ ಅಲ್ಲಿ
ನಂಬಿ ಪೂಜಿಸಿ ಮುಕ್ತಿಯ ಪಡೆಯಲರಿಯದ ಲೋಕದ ಗಜಿಬಿಜಿ
ದೈವಂಗಳಿಗೆರಗುವ ಕುನ್ನಿ ಮಾನವರ ಕಂಡರೆ ಯಮನು ಜಿಗಿದೆಳೆದೊಯ್ದು ಕೊಲ್ಲದಿಪನೆ ?
ಹಾಗೆ ಸಾಯಲೆಂದಾತ ನಮ್ಮ ಅಂಬಿಗರ ಚೌಡಯ್ಯ.
18.
ಪೊಡವಿಗಿಶ್ವರ ಗೌರಿಯೊಡೆಯ ಮದುವೆಯಾದಂದು ಒಡನಾಡಿದ ಮಾಧವ ಗೋವನಾದ
; ಮಿಗೆ ಓದಿದ ಬ್ರಹ್ಮ ಹೋತನ ತಿಂದ ; ಎಡೆಯಲಾದ ಜಿನ ಉಟ್ಟುದ ತೊರದ :
ಇವರ ಪೊಡಮಟ್ಟು ಪೊಡಮಟ್ಟು ಧಾತುಗಟ್ಟವರ ಕೇಡಿಂಗೆ
ಕಡೆಯಿಲ್ಲೆಂದನಂಬಿಗರ ಚೌಡಯ್ಯ.
19.
ಅಡವಿಯೊಳಗರಸುವಡೆ ಗಿಡಗಂಟಿ ತಾನಲ :
ಮಡುವಿನೊಳಗರಸುವಡೆ ಮತ್ಥ ಮಂಡೂಕವಲ್ಲ :
ತಪಂಬಡುವಡೆ ವೇಷಕ್ಕೆ ವೇಳೆಯಿಲ್ಲ ;
ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ :
ಆತನುವಿನೊಳಗೆ ಹುದುಗಿರ್ಪ ಲಿಂಗವ ನಿಲುಕಿ ನೋಡಿಯೇ
ಕಂಡನಂಬಿಗರ ಚೌಡಯ್ಯ.
20.
ಈಶ್ವರನ ಕಾಂಬುದೂಂದಾಸೆಯುಳ್ಕೊಡೆ ಪರದೇಶಕ್ಕೆ ಹೋಗಿ ಬಳಲದಿರು,
ಕಾಶಿಯಲ್ಲಿ ಕಾಯವ ವಿನಾಶವ ಮಾಡಲುಬೇಡ.
ಸರ್ವಶ ಮುಳುಗುತ್ತ ತೆರಹಿಲ್ಲವೆಂದಡೆ ಬೇರೊಂದು ಗೊಂಟ ಸಾರಿದ್ದಹನೆ ?
ನಿನ್ನಲ್ಲಿ ನೀ ತಿಳಿದು ನೋಡಾ ಜಗವು ನಿನ್ನೊಳಗೆಂದಾತ ನಮ್ಮ ಅಂಬಿಗರ ಚೌಡಯ್ಯ.
ಈ 20 ಶ್ರೀ ಅಂಬಿಗರ ಚೌಡಯ್ಯ ರವರ ಜೀವನ ಬದಲಿಸುವ ವಚನಗಳನ್ನು ಓದಿದರೆ ನಿಮ್ಮ ವಿಚಾರಗಳು ಬದಲಾಗುವುದು. ಈ ವಚನಗಳನ್ನು ನಿಮ್ಮ ಗೆಳೆಯ-ಗೆಳತಿಯರ ಮತ್ತುಕುಟುಂಬದ ಸದಸ್ಯರ ಜೊತೆ ಶೇರ್ ಮಾಡಿ.
ಇದು ನೋಡಿ: